
ನಾನು ನಿನ್ನ ಬಾಳ್ ಹಚ್ಕೊಂಡಿದ್ಯ. ಆದ್ರ ನೀನು ಈ ರೀತಿ ಮಾಡ್ತಿ ಅಂಥ ಅಂದ್ಕೊಂಡಿರಲಿಲ್ಲ. ನೀನು ನನಗ ಮೋಸ ಮಾಡ್ಲಿಲ್ಲ. ಕೊನೆ ಗಳಿಗೆಯಲ್ಲಿ ಪ್ರಿತಿನು ಮಾಡಲಿಲ್ಲ.
ನೀನು ಮಾಡಿರೋ ಸಹಾಯಕ್ಕೆ ನಾನು ಏನಂತ ವರ್ಣಿಸಲಿ, ಹೆಗಂಥ ಕೃತಜ್ಞತೆ ಸಲ್ಲಿಸಲಿ, ಯಾವ ರೀತಿ ಋಣ ತಿರಿಸ್ಲಿ ಅನ್ನದ ನನಗ ತಿಳಿದಂಗ ಆಗೈತಿ.
ನನಗ ತಂದೆ ತಾಯಿ ಇಲ್ಲ ಅಂಥ ಹೇಳ್ದಾಗ ನಿನ್ನ ಮನಸ್ಸಿಗೂ ನೋವಾತು ಅಂಥ ಹೇಳಿದಿ. ಕಾಲೇಜಿಗೆ ಸೇರಾಕ ರೊಕ್ಕ ಇಲ್ಲ ಅಂದಾಗ ನೀನ ಅದನ್ನ ಕೊಟ್ಟಿ. ಅಷ್ಟೆ ಅಲ್ಲ, ಹಾಸ್ಟೆಲಿಗೆ ಸೇರಾಕನೂ ನೀನೆ ಹಣ ತುಂಬಿದಿ.
ಅವಾಗವಾಗ ನನ್ನ ಖರ್ಚಿಗೂ ಹಣ ಕೊಡ್ತಿದ್ದಿ. ನಾನು ನಿನಗೆನಾಗಬೇಕು, ಸಂಬಂಧಿನಾ, ಬಂದುವಾ ಅಥವಾ ನನ್ನ ಬಾಳನ್ನು ಹಂಚಿಕೊಳ್ಳುವವನಾ ಏನು? ಇದ್ಯಾವುದು ಅಲ್ಲ. ಆದರೆ ನನ್ನ ಮೇಲೆ ಏಕೆ ಇಸ್ತೊಂದು ಅಕ್ಕರೆ, ಸ್ನೇಹ, ವಿಶ್ವಾಸ ನಿನಗೆ. ಅದು ನನಗೂ ತಿಳಿಲಿಲ್ಲಾ.ಹಿಂಗ ನಾನು ಬಾಳ್ ಯೋಚನೆ ಮಾಡ್ತಾ ಇದ್ದೆ.
ಕೆಲವು ಸಲ ನನ್ನ ಮನಸನ್ಯಾನ ಮಾತು, ಭಾವನೆನ ನಿನ್ನ ಮುಂದ ಹೇಳಿಕೊಳ್ಳೋಣ ಅಂತಾ ಬಾಳ್ ಸಲಾ ಪ್ರಯತ್ನ ಪಟ್ಯಾ ಆದರೆ ನಿನ್ನ ಮುಂದೆ ನಾನು ನಿಂತರೆ ಸಾಕು ಮಾತೆ ಹೊರಗ ಬರ್ತಿರ್ಲಿಲ್ಲ. ಹಿಂಗಾಗಿ ನನ್ನ ಮನಸ್ಸಿನ ಮಾತು ಭಾವನೆ ಹಂಗ ಮರೆ ಆಗಿ ಹೋದ್ವು. ಅದನ್ನ ನನಗ ಕೊನೆತನಕೂ ಹೇಳದಂಗಾತು. ಈಗೂ ಅದು ಹಾಗೆ ಉಳ್ಕೊಂತು.
ಇವತ್ತು ನಾನು ಈ ಊರಿಗೆ ದೊಡ್ಡ ಡಾಕ್ಟರ್ ಆಗೆನಿ. ಇದಕ್ಕೆ ನೀನೆ ಕಾರಣ. ನಾನ್ ಇಷ್ಟು ಸಾಧನೆ ಮಾಡಾಕ್ ನಿನ್ನ ಸ್ಫೂರ್ತಿ, ಪ್ರೋತ್ಸಾಹ, ನೀನು ನಂಗ ತುಂಬಿದ ಧೈರ್ಯಗಳೇ ಕಾರಣ.
'ನೀನು ಒಂಟಿಯಲ್ಲಾ. ನಿನ್ನ ಜೊತೆಗೆ ನಾನು ಅದೀನಿ. ನೀನು ಧೈರ್ಯವಾಗಿರು' ಅಂಥಾ ನೀನು ನಂಗ ಯಾವಾಗಲೂ ಹೇಳ್ತಿದ್ದಿ. ಆದ್ರ ಇವತ್ತು ಆ ಒಂಟಿತನ ಮತ್ತೆ ನನ್ನನ್ನಾ ಆವರಿಸಿಕೊಂಡಿದೆ ಅಂಥಾ ಅನಿಸ್ತಿದೆ. ಯಾಕೆ ಗೊತ್ತಾ ಇವತ್ತಿಗೆ ನೀನು ನನ್ನ ಕಣ್ಣ ಮುಂದೇನೆ ಇಲ್ಲ!
ನನ್ನನ್ನಾ, ಈ ಲೋಕಾನ ಬಿಟ್ಟು ಹೋಗಿ ಇವತ್ತಿಗೆ ನೀನು ಒಂದ್ ವರ್ಷ ಆತು.
ಆವತ್ತು ಒಂದ್ ದಿನ ಆಕ್ಸಿಡೆಂಟ್ ಆಗಿ ನೀನು ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಾ ಆಸ್ಪತ್ರೆಲಿ ಇದ್ದೆ. ಸರಿಯಾಗಿ ಚಿಕಿತ್ಸೆ ಸಿಗಲಿಲ್ಲ ಅಂಥಾ ಅಲ್ಲೇ ನಿನ್ನ ಪ್ರಾನಾನೂ ಬಿಟ್ಟೆ.
ನನಗಿನ್ನೂ ಆ ವಿಚಾರ ತಿಳಿದಿರಲಿಲ್ಲ. ಯಾಕಂದ್ರ ನಾನು ಆವಾಗ ನಿನ್ನ ಹತ್ರ ಇದ್ದಿರಲಿಲ್ಲ. ಹೆಚ್ಚಿನ ಸ್ಟಡಿಗಂತ ನೀನೆ ನನ್ನ ಫಾರಿನ್ ಗೆ ಕಳಿಸಿದ್ದಿ. ಹಿಂಗಾಗಿ ಕೊನೆ ಗಳಿಗೆಯಲ್ಲೂ ನಿನ್ನ ಮುಖಾನೂ ನಾನು ನೋಡಾಕ ಆಗಲಿಲ್ಲಾ. ನಾನು ತುಂಬಾ ನತದ್ರುಷ್ಟಳು. ನಾನು ನಿನ್ನ ಮುಂದ ಎಲ್ಲ ವಿಸ್ಯಾನು ಹೇಳಬೇಕಿತ್ತು. ನಾನು ನಿನ್ನ ತುಂಬಾ ಪ್ರೀತಿ ಮಾಡ್ತೀನಿ...
ಆದ್ರೆ ಏನು ಮಾಡ್ಲಿ, ಇವತ್ತು ನೀನು ನನ್ನ ಜೊತೆ ಇಲ್ದೆ ಒಬ್ಬಳೇ ನೋವು, ಸಂಕಟ, ವೇದನೆ ಅನುಭವಿಸ್ತಾ ಇದೀನಿ. ನೀನು ಇದ್ದಿದ್ರೆ ನಾನು ತುಂಬಾ ಸಂತೋಷ ಪಡ್ತಾ ಇದ್ದೆ ಈಗ ಆ ಸಂತೋಶಾನು ನಿನ್ನ ಜೊತೆಲೆ ಹೊರಟು ಹೊಗಿದೆ. ಈಗ ಮತ್ತೆ ಒಂಟಿತನ ಮತ್ತೆ ನನ್ನ ಕಾಡ್ತಾ ಇದೆ.
ಮುಂದಿನ ಒಂದ್ ಜನ್ಮಾ ಇದ್ರೆ ಅದು ನಿನ್ನ ಜೋತೇನೆ ಬಾಳ್ತಿನಿ....
4 comments:
Hi Brahmananda - Nice writings!!! You blog is featured on Kendasampige.com. I am very pleased to know that you are running your blog from rural Karnataka. Keep writing.
Best Reagards,
Ravi Hanj.
ರವಿ ಹಂಜ್ ಅವರಿಗೆ ನಮಸ್ಕಾರ,
ಬ್ಲಾಗ್ ಗೆ ಬಂದು ಸಲಹೆ ನೀಡಿದ್ದಕ್ಕೆ ತುಂಬಾ ಧನ್ಯವಾದ. ಬರೆಯಲು ಸಮಯ ಸಿಗದಿದ್ದರಿಂದ ಮೇಲಿಂದ ಮೇಲೆ ಬರೆಯಲು ಸಾಧ್ಯವಾಗುತ್ತಿಲ್ಲ. ಇನ್ನುಮುಂದೆ ಬರವಣಿಗೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವೆ.
ಬ್ರಹ್ಮಾನಂದ್
ನಮಸ್ಕಾರ.
ನವಿರಾದ ಬರಹ ಬ್ರಹ್ಮ.ಸೂಪರ್. ಆಪ್ತವೆನಿಸುವ ನಿರೂಪಣೆ. ತುಂಬಾ ಇಷ್ಟವಾಯಿತು. ಅಂದಹಾಗೆ ಯಾರದು ಹುಡುಗಿ?
ಧನ್ಯವಾದಗಳು,
ಜೋಮನ್.
ಬರವಣಿಗೆ ಧಾಟಿ, ಭಾಷೆ ಇಷ್ಟವಾಯ್ತು. ಮನಸ್ಸಿಗೆ ತಟ್ಟುತ್ತೆ. ಅಂದಹಾಗೆ ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com
ಮತ್ತೊಂದು ಅಶ್ಚರ್ಯಕ್ಕೆ
http://camerahindhe.blogspot.com/
Post a Comment