ಭಾರತ ಕ್ರಿಕೆಟ್ ತಂಡ ಯಾವಾಗ ಏನಾಗುತ್ತೆ ಎಂಬುದು ಗೊತ್ತಾಗುವುದಿಲ್ಲ. ಮೇಲಿಂದ ಮೇಲೆ ಸೋಲು ಕಂಡ ನಂತರ ಒಂದುಸಲ ಜಯ ತಂದುಕೊಂಡರೆ, ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಮನ ತಣಿಸುವ ಶಕ್ತಿ ಅದಕ್ಕಿದೆ ಎಂದರೆ ಅಚ್ಚರಿಪಡಬೇಕಿಲ್ಲ. ಆದರೂ, ಇದು ಸತ್ಯ.
ಕೆರಿಬಿಯನ್‌ನಲ್ಲಿ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ "ನಾವು ಗೆದ್ದೆ ಗೆಲ್ಲುತ್ತೇವೆ" ಎಂಬ ಅತಿಯಾದ ಆತ್ಮವಿಶ್ವಾಸದೊಂದಿಗೆ ಭಾರತ ಕ್ರಿಕೆಟ್ ಕಲಿಗಳು ತೆರಳಿದರು. ಆದರೆ ಆಗಿದ್ದೇನು? ಪಕ್ಕದ ಬಾಂಗ್ಲಾದೇಶಕ್ಕೆ ಮಣಿದಿದ್ದು. ಇದು 'ಹುಲಿಯನ್ನು ಹೊಡೆಯಲು ಹೋದ ಶೂರ, ಹಾದಿಯಲ್ಲಿದ್ದ ನಾಯಿಯನ್ನು ನೋಡಿ ಅಂಜಿದನಂತೆ' ಎಂಬಂತಾಗುತ್ತದೆ. ಇದು ಪರಿಹಾಸ್ಯವಲ್ಲ. ಆದ ನೈಜ ಘಟನೆಯ ಮುಂದಿರುವ ಕನ್ನಡಿ. ಅದರಲ್ಲಿ ಸತ್ಯವಷ್ಟೇ ಕಾಣಬೇಕು.
ಇಂತಹ ಸೋಲನ್ನು ಕಂಡ ಭಾರತ ದುರ್ಬಲ ಬರ್ಮುಡಾ ತಂಡವನ್ನು ಮಣ್ಣು ಮುಕ್ಕಿಸಿ, ಟೂರ್ನಿಯ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಆದರೆ, ಕೊನೆಯ ಶ್ರೀಲಂಕಾ ಪಂದ್ಯದಲ್ಲಿ ಸೋಲನುಭವಿಸಿ, ಸ್ವದೇಶಕ್ಕೆ ಮರಳಿದ ಭಾರತ ತಂಡಕ್ಕೆ ಸಿಕ್ಕಿದ್ದು, ಅಗೌರವ, ಟೀಕೆ!
ಬಿಸಿಸಿಐ ಕೂಡ ಭಾರತದ ಕ್ರಿಕೆಟ್ 'ಹುಲಿ'ಗಳಿಗೆ ಮೂಗುದಾರ ಹಾಕಲು ಹೊರಟರು. ಇದನ್ನು ಸಹಿಸಿಕೊಂಡ ಭಾರತ ತಂಡದ ಆಟಗಾರರು ಮುಂದಿನ ಬಾಂಗ್ಲಾದೇಶ ಸರಣಿ ಹಾಗೂ ದ.ಆಫ್ರಿಕಾ ಸರಣಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರ ವಿಶ್ವಕಪ್ ಸೋಲನ್ನು ಕೊಂಚ ಮರೆಯಾಗಿರಿಸಿದರು.
ಇದಾದ ನಂತರ ಇಂಗ್ಲೆಂಡ್ ಸರಣಿಯಂತೂ ಭಾರತೀಯ ಕ್ರಿಕೆಟ್ ತಂಡದ ಪಾಲಾಗಿ ವರವಾಗಿ ಒದಗಿತು. ಇದರಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಮತ್ತೆ ಹೊಸ ಚಲನೆಯನ್ನುಂಟು ಮಾಡಿತು. ಇದು ಹೋಗಲಿ ಬಿಡಿ. ಹಳೆಯ ಮಾತು.
ಹಿರಿಯರಿಲ್ಲದ ಯುವಪಡೆಯು ದ.ಆಫ್ರಿಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ, ದ.ಆಫ್ರಿಕಾ ತಂಡಗಳನ್ನೇ ಮಣಿಸಿ ಪ್ರಶಸ್ತಿಯನ್ನು ತಾಯ್ನೆಲಕ್ಕೆ ಹೊತ್ತು ತಂದರು. ಆಗ ಭಾರತದಲ್ಲಿ ಉಂಟಾದ ಸಂತಸ, ಸಂಭ್ರಮ ಅಷ್ಟಿಷ್ಟಲ್ಲ. ಅವರ ಸಂತಸಕ್ಕೆ ಅಪಾರವೇ ಇಲ್ಲದಂತಾಯಿತು. ಈ ವಿಶ್ವಕಪ್ ಭಾರತೀಯ ಕ್ರಿಕೆಟ್ ರಂಗಕ್ಕೆ ಮತ್ತೊಂದು ಶಿಖರವನ್ನು ನೀಡಿತೆಂದರೆ, ಅತಿಶಯೋಕ್ತಿಯೇನಲ್ಲ.
ಈಗ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಆಗಮಿಸಿದೆ. ಇದರಲ್ಲಿ ಈಗಾಗಲೇ ಭಾರತ ತಂಡವು ಆರಂಭದಲ್ಲಿ ಪರಾಭವಗೊಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಕಹಿ ಅನುಭವ ಪಡೆದ ದೋನಿ ಪಡೆ, ಚಂಡೀಗಢದಲ್ಲಿ ನಡೆದ ಮೊದಲ ಗೆಲುವು ಕಳೆದೆರಡು ಸೋಲುಗಳ ಕಹಿಯನ್ನು ಮರೆಸಿದೆ. ಸೋಲು ಗೆಲುವಿನ ಸೋಪಾನ ಎಂಬ ಮಂತ್ರವನ್ನು ಜಪಿಸುತ್ತಿರುವ ಭಾರತ ತಂಡ ಮುಂದೇನಾಗುತ್ತೆ.....
Tuesday, October 9, 2007
Subscribe to:
Post Comments (Atom)
No comments:
Post a Comment