ಬಹುಶಃ ನಾನು ಊರಲ್ಲಿ ಇದ್ದಿದ್ರೆ ವಿಜಯ ದಶಮಿಯನ್ನು ಅಲ್ಲಿಯೇ ಆಚರಣೆ ಮಾಡ್ತಾ ಇದ್ದೆ. ಆದ್ರೆ ಅದಕ್ಕೆ ಕಾಲ ಕೂಡಿ ಬಾರದ್ದರಿಂದ ಚೆನ್ನೈನಲ್ಲಿ ನನ್ನ ಯಾಂತ್ರಿಕ ಜೀವನದಲ್ಲಿಯೇ ಅಲ್ಲಿಯ ಹಬ್ಬದ ಆಚರಣೆ ಬಗೆಯನ್ನು ಜ್ಞಾಪಿಸಿಕೊಂಡು ಈ ಮೂಲಕ ನನ್ನ ಎಲ್ಲ ಮಿತ್ರರಿಗೆ, ಬಂಧು-ಬಾಂಧವರಿಗೆ ಹಾಗೂ ಈ ಬ್ಲಾಗ್ ಓದಿದವರಿಗೂ ಸಹ ವಿಜಯ ದಶಮಿಯ ಶುಭಾಶಯಗಳನ್ನು ಕೋರುತ್ತಿದ್ದೇನೆ.
ಉತ್ತರ ಕರ್ನಾಟಕದಲ್ಲಿ ವಿಜಯ ದಶಮಿ ದಿನದಂದು ಪತ್ರಿ ಹಾಗೂ ಪತ್ರಿಯ ಎಲೆಯನ್ನು ಹಿರಿಯ ಕೊಟ್ಟು ಅವರಿಗೆ ನಮಸ್ಕರಿಸಿ, "ನಾವು ನೀವು ಬಂಗಾರ್‌ದ್ಹಂಗ್ ಇರೂಣ" ಅಂತ ಹೇಳೋದು ಸಾಂಪ್ರದಾಯ. ಅದಕ್ಕೆ ನಾನು ಅಲ್ಲಿಲ್ಲದ್ದರಿಂದ, ಈ ಮೂಲಕ ಎಲ್ಲರಿಗೂ ಇದನ್ನೇ ಹೇಳಲು ಇಚ್ಛಿಸಲು ಬಯಸುವೆ.
'ನಿನ್ನೆಯ ಕಹಿಯನ್ನು ಮರೆಯೋಣ,
ನಾಳೆಯ ಏನಾಗುತ್ತೊ ಎಂಬುವುದನ್ನು ಬಿಡೋಣ
ಇಂದಿನ ಸಂತಸವನ್ನು ಹಂಚಿಕೊಳ್ಳೋಣ'
-ಎಂದು ಹೇಳುತ್ತಾ, ಈ ಬ್ಲಾಗ್ ಓದುಗರಿಗೆ, ಮಿತ್ರರಿಗೆ, ಬಂಧು-ಬಾಂಧವರಿಗೆ ಮತ್ತೊಮ್ಮೆ ವಿಜಯ ದಶಮಿಗಳ ಶುಭಾಶಯ ಕೋರುವೆ.
No comments:
Post a Comment